Our Story!
Bhartiya parivarjan Pranam. This is myself Jarno Sanchari Shamsundar Vasanta Kushtagi with 27 years of wide experience in print aswellas electronic media sector. It's been social media decade. After a short interval now I am reentering the media platform with my skeleton team to work for betterment people for the Bharat community. We work from Ground Zero. We are unbiased, impartial and we follow professional ethics. with all these positive thoughts we are starting a media company named as " Vasanta Shakuntala BPVK Bharati Broadcaster PVT. LTD that is - 'VSBPVK' Bharati broadcaster. Under this umbrella Star18'Kannada Vasanta Bharati dtv and Vishwa Plus TV.com , are digital channels. Firstly we are going to float " Vishwa Pluse Tv.com "which is aiming to keep sanatani Bharat intact. Spread the nationality among Bhartiya. Vishwa Plus TV covers video stories on Spiritual, Health, Grama Bharat, Rural culture, Defence and Police Life review, Our camera is a Hunter for unidentified talents, Literature Agriculture, Water resource, Fine Arts, New age Bharat , women and Yuva Bharat, Children & Old age life, Travel, Politics, News which is again concentrating on gram Bharat, Analysis and live discussions, peoples opinion on present developments, and many more human interest concepts are enlightening here as a informer as an knowledge network for Nation and peoples welfare.
We…
Jarno Sanchari Shamsundar ( Sham ) Kushtagi
Who started his carrier in Media as an Sub editor-cum- Reporter, Chief Reporter, Sinior Copy Editor, Buro chief, News Coordinator in these Print and Electronic media house among them Hosa Diganta, Udayavani, Samyukta Karnataka, Kannada Prabha are National Newspapers and Udaya tv , Etv Kannada, Tv’ 9 Karnataka, Suvarna News & Janashree Tv Channels are Electronic media platforms. Also he published a few books relating Journalistic byline stories of a few Sinor Journalists. Presently In this Media Company he is Chairman & Editor- in-Chief.
Annappa B.Gowda
Healing from Coastal Karnataka Who is a young goal setter. Who is the Technical part of our media house. Who is VFX-Editor, and who is also aimed to be Anchor for our Vishwa Plus Tv channel and a few well wishers are behind us to start this new media house. We request you one and all please watch vishwaplusTV.com and stay tuned with us for the human interest story line. We aimed to float a multilingual channel but at the early time at present we are coming into Kannada & this followed by Telugu. Respected audience please subscribe to Vishwa Plus TV.com watch on Youtube and all Social Media platforms. Guide us in the positive forum please forward the visuals to your near one which you are watching our videos and reading our Blog from time to time.
Total Posts
Favourites
Total Views
ನಿಮ್ಮ ಮುಂದೆ
ನಮ್ಮ ಪರಿಚಯ
_______
ನಮ್ಮ ಘೋಷವಾಕ್ಯ – ” ಜನಹಿತಕಿದು ಜ್ಞಾನದ ಜಾಲ ”
ಪ್ರಣಾಮ ಭಾರತ ಭಾರತೀಯರೇ ಪ್ರಣಾಮ. ನಾನು ಜರ್ನೋ ಸಂಚಾರಿ ಶಾಮ್ ( ಶಾಮಸುಂದರ ವಸಂತ ಕುಷ್ಟಗಿ ). ಮುದ್ರಣ ಹಾಗೂ ದೃಶ್ಯ ಮಾಧ್ಯಮದಲ್ಲಿ ಸುಮಾರು 27 ವರ್ಷಗಳ ಪುಟ್ಟ ಅನುಭವ ಹೆಗಲಿಗೆ ಕಟ್ಟಿಕೊಂಡವನು. ಕರ್ನಾಟಕದಲ್ಲಿ ಖಾಸಗಿ ಚಾನೆಲ್ ಗಳ ಪ್ರವೇಶದ ಯುಗ.ಅದು 1995ರ ಆಸು ಪಾಸು.ಅಂದಿನಿಂದ ಇಂದಿನ ತನಕ ಮಾಧ್ಯಮ ಕ್ಷೇತ್ರವೇ ನನ್ನ ಉಸಿರು. ಬದುಕಿನ ಏರಿಳಿತಗಳನ್ನು ಭರಿಸಲಾಗದೆ ಕೆಲಕಾಲ ಅಜ್ಞಾತ ಸ್ಥಳದಲ್ಲಿದ್ದೆ. ರಾಷ್ಟ್ರ ಹಾಗು ಜನಹಿತದ ತುಡಿತ ಬಹುವಾಗಿ ಕಾಡಿತು. ಆ ಕೊರೆತವೇ ಮನಸ್ಸು
ತುಂಬಿಕೊಂಡಿತು. ಈ ಸಂದರ್ಭದಲ್ಲಿ ಮನಸ್ಸಿಗೆ ಅನ್ನಿಸಿದ್ದು, ‘ ನಾನೀಗ ಪ್ರಬುದ್ಧ . ಮಾಧ್ಯಮರಂಗದ ವ್ಯಾಪಕ ಅನುಭವ ಬಳಸಿಕೊಂಡು ಕೆಲಸ ಮಾಡಬಲ್ಲೆ. ಈ ಹುರುಪು ಮತ್ತೊಮ್ಮೆ ದೇಹದ ಕಣ ಕಣದಲ್ಲೂ ವಿಶ್ವಾಸಕ್ಕೆ ಉಸಿರಾಗಿ ತುಂಬಿಕೊಂಡಿತು’ . ಇದು ವಿನೂತನವಾಗಿ ಜನಜನಿತವಾಗುತ್ತಿರುವ ಡಿಜಿಟಲ್ tv ಮತ್ತು ಸಾಮಾಜಿಕ ಜಾಲತಾಣಗಳ ಕಾಲಘಟ್ಟ. ಈ ಸಂಧರ್ಭ ಸಕಾರಾತ್ಮಕವಾಗಿ ಬಳಸಿಕೊಂಡು ಪುಟ್ಟ ತಂಡದ ಜೊತೆಗೆ ನ್ಯೂ ಮೀಡಿಯಾ ವೇದಿಕೆಗಳ ಮೂಲಕ ಮರುಪ್ರವೇಶ ಮಾಡುತ್ತಿದ್ದೇನೆ.
ಭಾರತದ ಪ್ರತಿ ಹಳ್ಳಿ ಮಾದರಿಗ್ರಾಮ ಆಗಬೇಕು ಇದು ನಮ್ಮ ” ವಿಷನ್ “. ಸನಾತನದ ನೆಲೆಯಿಂದ ಆಧ್ಯಾತ್ಮ, ಇತಿಹಾಸದ ಸತ್ಯದ ಸೆಲೆಯಿಂದ ರಾಷ್ಟ್ರೀಯತೆಯ ಪ್ರಸರಣ, ವಿಶ್ವಗುರು ಆಗುವ ಅಮೃತ ಕಾಲದ ನಮೋ ಭಾರತದ ಸಂಕಲ್ಪಕ್ಕೆ ಕ್ಯಾಮೆರಾ ಕಣ್ಣು ಹಾಗೂ ಅಕ್ಷರದ ಬಾಗಿನದ ಮೂಲಕ ಸಮಚಿತ್ತದ ಕರ್ತವ್ಯ ಪಾಲನೆ ನಡೆ ನಮ್ಮ
“ಮಿಷನ್ “.
ಭಾರತದ ಭಾರತೀಯರೆಲ್ಲ ಸಮೃದ್ಧ ಜೀವನ ಬಾಳುವುದು, ಇವರ ಬಾಳೆ ಭಾರತದ 5ಟ್ರಿಲಿಯನ್ ಸಂಕಲ್ಪಕ್ಕೆ ಶಕ್ತಿ ತುಂಬುವುದು. ಇದು ನಮ್ಮ ಕಾಯಕದ ” ಪರ್ಪಸ್ ” ಈ ಗುರಿ ಸಾಧನೆಯ ನಮ್ಮ ಅದಮ್ಯ ವಿಶ್ವಾಸದ ಪ್ರತ್ಯಕ್ಷವಾಗಿ ಬರುತ್ತಿದೆ
” ವಸಂತ ಶಕುಂತಲಾ
ಬಿಪಿವಿಕೆ ‘ ಭಾರತಿ
ಬ್ರಾಡ್ಕಾಸ್ಟರ್ ಪ್ರೈವೆಟ್.ಲಿಮಿಟೆಡ್ ಮೀಡಿಯಾ ಕಂಪನಿ . ಈ ಕಂಪನಿಯ ನೆರಳಲ್ಲಿ ದೃಶ್ಯ ಮತ್ತು ಮುದ್ರಣ ಮಾಧ್ಯಮ ಚಟುವಟಿಕೆಗಳು ಆರಂಭ ಇಟ್ಟುಕೊಳ್ಳಲಿವೆ. ನಮ್ಮ ಕಾರ್ಯನಿರತ ಮಾಧ್ಯಮದ ಮೊದಲ ಹೆಜ್ಜೆ ವಿಶ್ವ ಪ್ಲಸ್ ಟಿವಿ. ಕಾಂ ಯೂಟ್ಯೂಬ್ ಚಾನೆಲ್. ಅಷ್ಟೂ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲೂ ಕಾಣಸಿಗಲಿರುವ ವಿಶ್ವ ಪ್ಲಸ್ ಟಿವಿ ” ಕನ್ನಡ’ದ ನೆಲೆಯಲ್ಲಿ ಬರುತ್ತಿರುವ ಹೊಚ್ಚ ಹೊಸ ಚಾನೆಲ್ ಆಗಿದೆ. ಇದಾದ ಕೆಲವೇ ಕಾಲದಲ್ಲಿ ‘ ತೆಲುಗು ‘ ಭಾಷೆಯಲ್ಲೂ ವಿಶ್ವ ಪ್ಲಸ್ ಟಿವಿ ಹೆಜ್ಜೆ ಹಾಕಲಿದೆ.
ಸನಾತನದ ಅಂತರಂಗದಿಂದ
” ದಿವ್ಯದರ್ಶನ “, ಭಾರತದ ವಿಶ್ವಗುರು ಮುಕುಟಕ್ಕಿಡುವ ” ಗ್ರಾಮ ಭಾರತದ ” ಮಹತ್ವದ ಕೊಡುಗೆ, ಜ್ಞಾನ-ವಿಜ್ಞಾನ ತಂತ್ರಜ್ಞಾನದ ನಡಿಗೆಯಲ್ಲಿ ” ಯುವ ಭಾರತದ ” ನೋಟ,
ಮನುಜಕುಲದ ಬದುಕು ಬಾಳಿದ ಅನುಭವದಲ್ಲಿ ಹಿರಿಯರ
” ಏರಿಳಿತಗಳು
“, ನೈಜ ಇತಿಹಾಸದ ಆಳದಿಂದ
” ರಾಷ್ಟ್ರೀಯತೆಗೆ ” ಧ್ವನಿ.
ಈ 5 ವಿಷಯಗಳನ್ನು ಆದ್ಯತಾ ಪರಿಕಲ್ಪನೆಗಳನ್ನಾಗಿ ಪರಿಗಣಿಸುವ ಆಶಯ.ವಿಶ್ವ ಪ್ಲಸ್ ಟಿವಿ ಯಾರ ಪ್ರಭಾವಕ್ಕೂ ಒಳಗಾಗದೆ ಜನಹಿತದ ಕರ್ತವ್ಯವನ್ನು ರಾಷ್ಟ್ರದ ಸಂರಕ್ಷಣೆಗಾಗಿ ಸಮಚಿತದಿಂದ ತನ್ನ ವೃತ್ತಿ ಧರ್ಮಪಾಲಿಸುವ ಕರ್ತವ್ಯಪಥದಲ್ಲಿ ಮುಂದೆ ಮುಂದೆ ಸಾಗಲಿದೆ. ಇದರ ಘೋಷ ವಾಕ್ಯ ( ಟ್ಯಾಗ್ ಲೈನ್ ) ” ಜನಹಿತಕಿದು ಜ್ಞಾನದ ಜಾಲ “.
ಗ್ರಾಮೀಣ ಭಾಗದ ಅಂದಂದಿನ ಬೆಳವಣಿಗೆಗಳೇ
ವಿಶ್ವ ಪ್ಲಸ್ ಟಿವಿ ಸುದ್ದಿ ವಿಭಾಗದ ಪ್ರಮುಖ ನ್ಯೂಸ್ ಸಿಪ್ ಆಗಲಿದೆ . ಸುತ್ತ ಘಟಿಸುವ ಬೆಳವಣಿಗೆಗಳು ನಮ್ಮ
ಸುದ್ದಿಬಿಂಬಗಳ ಪ್ರಸ್ತುತಿಯ
ವಿಷಯವಸ್ತು. ಸ್ಥಳೀಯ ನೇತಾರರು, ಆ ನೇತಾರರ ರಾಜ-ಕಾರಣದ ಪೊಲಿಟಿಕಲ್ ಡಿಕ್ಷನರಿ ನಮ್ಮ ಕ್ಯಾಮೆರಾ ಕಣ್ಣು ಹಾಗೂ ಅಕ್ಷರಗಳಲ್ಲಿ ತೆರೆದುಕೊಳ್ಳಲಿದೆ.
ಅಷ್ಟೇಅಲ್ಲ, ಒಕ್ಕಲುತನ, ಜಲ,ನೆಲ,ಭಾಷೆ, ಸಾಹಿತ್ಯ, ಸಂಗೀತ,ಜನಪದ ಸೇರಿದಂತೆ ವಿಶ್ವಪ್ಲಸ್ ಟಿವಿ ಹೊತ್ತುತರಲಿದೆ ಸಂಸ್ಕೃತಿಯ ದಿಬ್ಬಣ. ಇಲ್ಲಿ ಸ್ತ್ರೀಶಕ್ತಿ, ಮಕ್ಕಳ ಜಾಯ್ಫುಲ್ ಜೀವನ, ಪ್ರವಾಸದ ವೈವಿಧ್ಯಮಯ ಯಾನ, ಕೊರಗುತ್ತಿರುವ ದೇಸಿ ಕ್ರೀಡೆ, ಸಾಮಾನ್ಯ- ಅಸಾಮಾನ್ಯ ಸಾಧಕರ ಪರಿಚಯ, ಶಿಕ್ಷಣ, ಸಮಾಜ ಸೇವೆ ಹೀಗೆ ಎಲ್ಲದರ ಬಗ್ಗೆ ತಿಳಿಯುತ್ತಾ, ತಿಳಿಸುವ ಜ್ಞಾನದ ಭಂಡಾರ
ವಿಶ್ವಪ್ಲಸ್ ಟಿವಿ.ಕಾಂ ಚಾನೆಲ್.
ನಾವು ಯಾರು ….
——
ಜರ್ನೋ ಸಂಚಾರಿ ಶಾಮ್ ಕುಷ್ಟಗಿ :-
ನಾಡಿನ ವಿದ್ಯಾರ್ಥಿಗಳಿಂದ ಹಾರಯಿಕೆ ಕವಿ ಎಂದೇ ಬಿರುದಾಂಕಿತರಾದ ಕನ್ನಡನುಡಿ
ತೇರನೆಳೆದ ವೀರಸೇನಾನಿ ಭಾಷಾ ಭಾರತಿಯ ತನುಜಾತೆ ಕನ್ನಡ ತಾಯಿಯ ಸುಪುತ್ರ ನುಡಿಸಿರಿ ಪ್ರೊ.ವಸಂತ ಕುಷ್ಟಗಿ ಹಾಗೂ ಸಾದ್ವಿ ಶಕುಂತಲಾ ಕುಷ್ಟಗಿಯವರ ಸುಪುತ್ರ. ಶಾಮ್,ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದವರು. ಹೊಸದಿಗಂತ, ಉದಯವಾಣಿ, ಸಂಯುಕ್ತ ಕರ್ನಾಟಕ ಹಾಗೂ ಕನ್ನಡ ಪ್ರಭ ರಾಷ್ಟ್ರೀಯ ಪತ್ರಿಕೆಗಳು ಉದಯ ಟಿವಿ ನ್ಯೂಸ್, ಈಟಿವಿ ಕನ್ನಡ ನ್ಯೂಸ್ , ಟಿವಿ9 ಕರ್ನಾಟಕ, ಸುವರ್ಣ ನ್ಯೂಸ್ ಹಾಗೂ ಜನಶ್ರೀ ಟಿವಿ ಗಳಲ್ಲಿ ವರದಿಗಾರ, ಬ್ಯುರೋ ಮುಖ್ಯಸ್ಥ, ಪ್ರಧಾನ ವರದಿಗಾರ, ಉಪಸಂಪಾದಕರಾಗಿ, ಸೀನಿಯರ್ ಕಾಪಿ ಎಡಿಟರ್ ಆಗಿ,ಸುದ್ದಿ ಸಂಯೋಜಕರಾಗಿ, ಟಿ.ವಿ ಚಾನೆಲ್ ಗಳನ್ನು ಕಟ್ಟಿದ ಪ್ರಧಾನ ತಂಡದ ಮೊದಲ ಟೀಂ ಸದಸ್ಯರಾಗಿ ಕನ್ನಡ ಪತ್ರಿಕೋದ್ಯಮದಲ್ಲಿ ಚಿರಪರಿಚಿತರು. ಕೆಲವು ಹಿರಿಯ ಪತ್ರಕರ್ತರ ಅಂಕಣ ಬರಹಗಳನ್ನು ಒಟ್ಟು ಜೋಡಿಸಿ, ಅವಕ್ಕೆ ಪುಸ್ತಕ ರೂಪನೀಡಿ ಆಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಪುಸ್ತಕ ಪ್ರಕಾಶಕರೂ ಆಗಿದ್ದಾರೆ. ಇವರು
‘ ವಿಎಸ್ ಬಿಪಿವಿಕೆ ‘ ಭಾರತಿ ಬ್ರಾಡ್ಕಾಸ್ಟರ್ ಕಂಪನಿ ಸಂಸ್ಥಾಪಕರು ಹಾಗೂ ವಿಶ್ವಪ್ಲಸ್ ಟಿವಿ. ಕಾಂ ಚಾನೆಲ್ ಗೆ
ಎಡಿಟರ್ ಇನ್-ಚೀಫ್.
ಅಣ್ಣಪ್ಪ ಬೀರ ಗೌಡ :-
______
ಮಲೆನಾಡಿಗೂ ಸನಿಹ ಕಡಲತೀರಕ್ಕೂ ಹತ್ತಿರ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ರಪ ರಪನೆ ಸುರಿಯುವ ಮಳೆ ಬೆವರಿಳಿಸುವ ಉರಿ ಬಿಸಿಲು ಇದು ಒಂದು ನಾಣ್ಯದ ಎರಡು ಮುಖವಿದ್ದಂತೆ. ಇದು ಇಲ್ಲಿ ವಾತಾವರಣಕ್ಕಿರುವ ಮೆರಗು. ಸಮಾಜವಾದಿ ರಾಮಕೃಷ್ಣ ಹೆಗಡೆಯವರ ಊರು ದೊಡ್ಮನೆ. ಇದಕ್ಕೆ
ಕೂಗಳತೆ ದೂರ ‘ ಉಡಳ್ಳಿ . ಈ ಹಳ್ಳಿಯ ನವಯುವಕ ಅಣ್ಣಪ್ಪ. ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ
ಬಿ.ಎ ಓದುತ್ತಿದ್ದಾರೆ.
ವಿಎಫ್ಎಕ್ಸ್ ಎಡಿಟಿಂಗ್ ಕೋರ್ಸ್ ಮತ್ತು ಕ್ಯಾಮೆರಾ ಡಿಪ್ಲೋಮಾ ಪೂರೈಸಿದ್ದಾರೆ. ಇವರು ವಿಶ್ವಪ್ಲಸ್ ಟಿವಿ’ಯಲ್ಲಿ ದೃಶ್ಯ ಸಂಕಲನ ಮಾಡ್ತಾರೆ. ಸುದ್ದಿವಾಚಕ ಆಗುವ ಉತ್ಸಾಹ ಇವರಿಗಿದೆ. ಕಲಿಯುವ ಹಾಗೂ ಸಾಧಿಸುವ ಹುಚ್ಚು ಹುರುಪಿರುವ ಅಣ್ಣಪ್ಪ ಇಲ್ಲಿ ನಡೆಯುವ ಮಾಧ್ಯಮದ ಅಷ್ಟೂ ಚಟುವಟಿಕೆಗಳ ವರ್ಕಿಂಗ್ ಪಾರ್ಟ್ನರ್.
ಇನ್ನು ಈ ಮಾಧ್ಯಮ ಕಂಪನಿ ಕಟ್ಟಲು ಬೆನ್ನಿಗೆ ನಿಂತವರು ಹಲವರು. ಅವರಲ್ಲಿ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ತೆಲಂಗಾಣದ ಡಾ. ಹರತಿ ದ್ವಾರಕನಾಥ್ , ಶ್ರೀಮತಿ ಭಾಮಾ ದ್ವಾರಕನಾಥ್, ಕರ್ನಾಟಕದಲ್ಲಿ ಇತಿಹಾಸ ತಜ್ಞ ಡಾ|ಹೆಚ್. ಎಸ್.ಗೋಪಾಲ ರಾವ್, ಭಕ್ತಿಪಂಥದ ಚಿಂತಕ ಪಂಡಿತ್ ಶ್ರೀ ರಘು ಪ್ರೇಮಾಚಾರ್ಯ, ಸಮಾಜಸೇವಕರಾದ ಶ್ರೀ ಶರಣಪ್ಪ ಸಿಂದೋಗಿ, ಶ್ರೀ ಪ್ರಲ್ಹಾದ ಮಟಮಾರಿ,ಶ್ರೀ ಕೆ.ಪಿ ಆನಂದಪ್ಪ, ಗಾಯಕಿ ಡಾ. ಅರ್ಚನಾ ಕುಲಕರ್ಣಿ ಕಾನ್ಯಾಳ , ರಂಗಕರ್ಮಿ ಶ್ರೀ ವಿನೋದ್ ಅಂಬೇಡ್ಕರ್, ಶಿಕ್ಷಕ ಸಾಹಿತಿ ಡಾ. ಸಂಜೀವ್ ಕುಮಾರ್ ಅತಿವಾಳೆ, ತಾರಾನಾಥ್ ಶಿಕ್ಷಣ ಸಂಸ್ಥೆ, ಏಕಲ್ ಶಾಲಾ ಪ್ರಮುಖ ಯೋಗ ಗುರು ಶ್ರೀ ಗೋವಿಂದರಾಜು.ಎಮ್, ವಿಷ್ಣು ಪ್ರಿಂಟರ್ಸ್ ಮಾಲೀಕ ಶ್ರೀ ಚೆನ್ನಕೇಶವ ಮೂರ್ತಿ, ಆಧ್ಯಾತ್ಮದ ನೆಲೆಯ ಶ್ರೀಮತಿ ಜಯಶ್ರೀ ಗಾಯಕ್ವಾಡ್, ನವೋದಯ ಶಾಲೆ ಶಿಕ್ಷಕಿ ಶ್ರೀಮತಿ ರಾಧಾ ಜೋಶಿ ದೀಕ್ಷಿತ್ ಮತ್ತು ಕ್ಯಾಮೆರಾ ಹಾಗೂ ಸ್ಟುಡಿಯೋ ಪರಿಣಿತ ಶ್ರೀನಾಥ್.ಎಸ್ , ವಿಡಿಯೋ ಕ್ಯಾಮೆರಾ ಡೆಮೋನ್ಸ್ಟೇರೇಟರ್ ಶ್ರೀ ನಾಗೇಶ್.
ರಾಷ್ಟ್ರ ಹಾಗೂ ಜನರ ಸೇವೆಯ ನಮ್ಮ ಮಾಧ್ಯಮದ ಈ ಕಾಯಕಕ್ಕೆ ನೀವು ಪ್ರೇಕ್ಷಕರು ಮತ್ತು ಓದುಗರೇ ಗತಿಶಕ್ತಿ. ನಮ್ಮ ಪ್ರಸ್ತುತಿಯ ವಿಶ್ವ ಪ್ಲಸ್ ಟಿವಿ ಚಾನೆಲ್ ಗೆ ಸಬ್ಸ್ಕ್ರೈಬರ್ ಆಗಿ, ಬೆಂಬಲಿಸಿ. ನೋಡಿದ ಎಲ್ಲ ವಿಡಿಯೋ ನಿಮ್ಮವರಿಗೆ ಫಾರ್ವರ್ಡ್ ಮಾಡಿ ಸಹಕರಿಸಿ. ಪ್ರಣಾಮಗಳು.
” ಜನಹಿತಕಿದು ಜ್ಞಾನದ ಜಾಲ”